Quinquennial celebration
ಮಂಗಳೂರಿನ ಅಶೋಕನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಾಲೆಯಲ್ಲಿ ಅಕ್ಟೋಬರ್ 8 ರಂದು ಬುಧವಾರ ಶಾಲೆಯ ಐದನೇ ವರ್ಷದ ಪಂಚಮೋತ್ಸವ ಕಾರ್ಯಕ್ರಮ ಭವ್ಯವಾಗಿ ನಡೆಯಿತು.ಪ್ರಾಂಶುಪಾಲೆ ಶ್ರೀಮತಿ ಜೋಯ್ ಜೀವನ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶೈಕ್ಷಣಿಕ ಸಂಯೋಜಕಿ ಶ್ರೀಮತಿ ಉಷಾ ಹೆಗ್ಡೆ ಉಪಸ್ಥಿತರಿದ್ದರು.ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ವಿದ್ಯಾರ್ಥಿನಿ ಪರಿಣಿತ ಸ್ವಾಗತ ನುಡಿಗಳನ್ನು ಸಲ್ಲಿಸಿದರು. ನಂತರ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಶಾಲೆಯ ಐದು ವರ್ಷದ ಯಶಸ್ವಿ ಪ್ರಯಾಣವನ್ನು ಸ್ಮರಿಸುತ್ತ, ಶ್ರೀಮತಿ ದೀಪ್ತಿ ವರದಿ ವಾಚಿಸಿದರು. ಶಿಕ್ಷಕಿಯರಾದ ಸರಿತಾ ಮತ್ತು ಲಕ್ಷ್ಮೀ ತಮ್ಮ ಅಮೂಲ್ಯ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳಾದ ಮಹತಿ , ಆದ್ಯ, ಐಸಿರಿ, ಬೃಂದಾ ತಮ್ಮ ಶಾಲಾ ಜೀವನದ ಅನುಭವಗಳನ್ನು ಹೃದಯಸ್ಪರ್ಶಿಯಾಗಿ ಪ್ರಸ್ತುತಪಡಿಸಿದರು.
ವಿದ್ಯಾರ್ಥಿಗಳ ಕಲಾತ್ಮಕ ನೃತ್ಯ ಪ್ರದರ್ಶನಗಳು ಎಲ್ಲರ ಮನ ಗೆದ್ದವು. ಪ್ರಾಂಶುಪಾಲೆ ಶ್ರೀಮತಿ ಜೋಯ್ ಜೀವನ್ ರೈ ಅವರು ಯಶಸ್ವಿ ಜೀವನವನ್ನು ಹೊಂದುವ ಕುರಿತು ಪ್ರೇರಣಾದಾಯಕ ಮಾತುಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಆಶೀರ್ವಾದ ನೀಡಿದರು. ಶೈಕ್ಷಣಿಕ ಸಂಯೋಜಕಿ ಶ್ರೀಮತಿ ಉಷಾ ಹೆಗ್ಡೆ ಸ್ಪೂರ್ತಿದಾಯಕ ಮಾತುಗಳನ್ನು ಆಡಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿನಿ ಅದಿತ್ರಿ ಧನ್ಯವಾದ ಸಲ್ಲಿಸಿದರು. ಸಂಪೂರ್ಣ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ವಿಶ್ರುತ ಯಶಸ್ವಿಯಾಗಿ ನಿರ್ವಹಿಸಿದರು. ಶಾಲೆಯ ಪ್ರತೀ ತರಗತಿಯ ಶಿಕ್ಷಕ- ರಕ್ಷಕ ಸಂಘದ ಪದಾಧಿಕಾರಿಗಳು, ಶಿಕ್ಷಕ ವೃಂದ, ಶಿಕ್ಷಕೇತರ ಸಿಬ್ಬಂದಿಗಳು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪಂಚಮೋತ್ಸವ ಕಾರ್ಯಕ್ರಮವು ಶಾಲೆಯ ಐದು ವರ್ಷದ ಸಾಧನೆಯ ಸಂಭ್ರಮವನ್ನು ಸ್ಮರಣೀಯಗೊಳಿಸಿದ ಒಂದು ಅರ್ಥಪೂರ್ಣ ಕ್ಷಣವಾಯಿತು






